   ಮೂಲದೊಡನೆ ಹೋಲಿಸಿ

ಓಜೋ಼ನೀಕರಣ : ಓಲಿಫಿನ್ ಹೈಡ್ರೊಕಾರ್ಬನ್ನುಗಳನ್ನು ಛೇದಿಸಲು ನಿರ್ವಹಿಸುವ ಕ್ರಿಯೆ (ಓಜೋ಼ನೈಸೇûಷನ್). ಸಿ.ಹ್ಯಾರೀಸ್ ಎಂಬಾತ ಮೊದಲು ಈ ಕ್ರಿಯೆಯನ್ನು ಸಂಶೋಧಿಸಿದವ (1903). ಹಲವಾರು ಅಪರ್ಯಾಪ್ತ ಆಗಾರ್ಯ್‌ನಿಕ್ ಸಂಯುಕ್ತಗಳ ತಯಾರಿಕೆಯಲ್ಲೂ ರಚನೆಯ ಶೋಧನೆಯಲ್ಲೂ ಇದರ ಉಪಯೋಗ ಉಂಟು. ಅಪರ್ಯಾಪ್ತ ಸಂಯುಕ್ತದ ಆಗಾರ್ಯ್‌ನಿಕ್ ದ್ರಾವಣದ ಮೂಲಕ ಓಜೋ಼ನನ್ನು ಹಾಯಿಸಿದಾಗ ಓಜೋ಼ನೈಡ್ ದೊರೆಯುವುದು. ಇದನ್ನು ಹೈಡ್ರೋಜನ್ನಿನಿಂದ ಉತ್ಕರ್ಷಿಸಿದಾಗ ಅಥವಾ ಜಲವಿಶ್ಲೇಷಿಸಿದಾಗ (ಹೈಡ್ರೊಲಿಸಿಸ್) ಆಲ್ಡಿಹೈಡ್ ಅಥವಾ ಕೀಟೋನ್ ಸಿಕ್ಕುತ್ತದೆ. ಈ ವಸ್ತುಗಳ ಲಕ್ಷಣಗಳಿಂದ ಅಪರ್ಯಾಪ್ತ ಸಂಯುಕ್ತಗಳಲ್ಲಿರುವ ದ್ವಿಬಂಧ (ಡಬಲ್ ಬಾಂಡ್) ಸ್ಥಾನವನ್ನು ಪತ್ತೆಮಾಡಬಹುದು.

ಉದಾಹರಣೆಗೆ ಅ6ಊ12 ಅಣುಸೂತ್ರ ಪಡೆದಿರುವ ಒಂದು ಅಪರ್ಯಾಪ್ತ ಸಂಯುಕ್ತವನ್ನು ಓಜೋ಼ನೀಕರಿಸಿ ಜಲವಿಶ್ಲೇಷಿಸಿದಾಗ ಅ2ಊ4ಔ ಅಣುಸೂತ್ರವಿರುವ ಆಲ್ಡಿಹೈಡೂ ಅ4ಊ8ಔ ಅಣುಸೂತ್ರವಿರುವ ಕೀಟೋನೂ ಉತ್ಪತ್ತಿಯಾಗುತ್ತವೆಂದು ಭಾವಿಸೋಣ. ಆಗ ಅ2ಊ4ಔ ಆಲ್ಡಿಹೈಡಾಗಿರುವುದರಿಂದ ಅದರಲ್ಲಿ ಒಂದಾದರೂ -ಅಊಔ ಗುಂಪು ಇರಲೇಬೇಕು. ಅಂದರೆ ಅದರ ಅಣುಸೂತ್ರ ಅಊ3ಅಊಔ (ಅಸಿಟಾಲ್ಟಿಹೈಡ್) ಎಂದಾಯಿತು.  ಸಂಯುಕ್ತ ಕೀಟೋನಾಗಿರುವುದರಿಂದ ಅದರಲ್ಲಿ ಒಂದಾದರೂ  -ಅಔ- ಗುಂಪು ಇರಲೇಬೇಕು. ಅಂದರೆ ಅದರ ರಚನಾಸೂತ್ರ ಅಊ3-ಅಔ- ಅ2ಊ5  (ಈಥೈಲ್ ಮಿಥೈಲ್ ಕೀಟೋನು) ಎಂದಾಯಿತು. ಅ6ಊ12 ಅಣುಸೂತ್ತ ಆಲ್ಕೀನಿನ ಸಾಮಾನ್ಯ ಸೂತ್ರ ಅಟಿಊ2ಟಿ ನ್ನು ಹೋಲುವುದರಿಂದ ಅದು ಒಂದು ಆಲ್ಕೀನ್. ಇದನ್ನು ಓಜೋ಼ನೀಕರಿಸಿ ಜಲವಿಶ್ಲೇಷಿಸಿದಾಗ ದ್ವಿಬಂಧಸ್ಥಾನದಲ್ಲಿ ಅಣು ಸೀಳಿ ಆಲ್ಡಿಹೈಡ್ ಮತ್ತು ಕೀಟೋನ್ ಕೊಡುತ್ತದೆ. ಇವುಗಳ ಅಣುಸೂತ್ರಗಳ ಪ್ರಕಾರ ದ್ವಿಬಂಧದ ಒಂದು ಪಾಶರ್ವ್‌ದಲ್ಲಿ ಎರಡು ಇಂಗಾಲ ಪರಮಾಣುಗಳು ಅಸಿಟಾಲ್ಡಿಹೈಡಿನಲ್ಲಿರುವಂತೆಯೂ ಮತ್ತೊಂದು ಪಾಶರ್ವ್‌ದಲ್ಲಿ ಇಂಗಾಲದ ನಾಲ್ಕು ಪರಮಾಣುಗಳು ಈಥೈಲ್ ಕೀಟೋನಿನಲ್ಲಿರುವಂತೆಯೂ ಇವೆ. ಅಂದರೆ ಸೂಕ್ಷ್ಮರಚನೆ ಹೀಗಿರಬೇಕು:

ಈಗ ಈ ಸೂತ್ರಕ್ಕೆ ಹೈಡ್ರೊಜನ್ ಪರಮಾಣುಗಳನ್ನು ಪ್ರತಿ ಇಂಗಾಲದ ನಾಲ್ಕು ವೇಲೆನ್ಸಿಯನ್ನು ಭರ್ತಿಮಾಡುವಂತೆ ಸೇರಿಸಿ ರಚನೆ ಬರೆದಾಗ ಅ6ಊ12 ಸಂಯುಕ್ತದಲ್ಲಿನ  ದ್ವಿಬಂಧ ಸ್ಥಾನ ವೇದ್ಯವಾಗಿರುತ್ತದೆ.

ಓಜೋ಼ನೀಕರಣ ಯುಗ್ಮಬಂಧವನ್ನು ಛೇದಿಸುವುದಕ್ಕೆ ಅಳವಡಿಸುವ ಬೇರೆ ಉತ್ಕರ್ಷಣ ವಿಧಾನಗಳಿಗಿಂತ ಉತ್ತಮವಾದುದು. ಕಾರಣ ಓಜೋ಼ನೈಡುಗಳನ್ನು ವಿಭಜಿಸುವ ಮೊದಲೇ ಓಜೋ಼ನನ್ನು ಪ್ರತಿಕ್ರಿಯೆಯ ಪರಿಮಿತಿಯಿಂದ ಹೊರತೆಗೆಯ ಬಹುದು. ಪ್ರಯೋಗಶಾಲೆಯಲ್ಲಿ ರಚನಾ ವಿಶ್ಲೇಷಣೆಗಾಗಿ ಓಜೋ಼ನೀಕರಣವನ್ನು  ಹೇರಳವಾಗಿ ಅಳವಡಿಸುತ್ತಾರೆ. ಆಲ್ಡಿಹೈಡುಗಳು ಮತ್ತು ಆಮ್ಲಗಳ ಸಂಶ್ಲೇಷಣೆಯಲ್ಲಿ ವಾಣಿಜ್ಯದೃಷ್ಟಿಯಿಂದ ಹೆಚ್ಚು ಉಪಯೋಗವಿದೆ. ಆದರೆ ಕೆಲವು ಓಜೋ಼ನೈಡುಗಳು ಸ್ಫೋಟಕ ವಸ್ತುಗಳಾಗಿರುವುದು ಈ ಕ್ರಿಯೆಯ ಪ್ರಯೋಜನವನ್ನು ಮೊಟಕುಗೊಳಿಸಿದೆ. ಓಜೋ಼ನೈಡನ್ನು ಬೇರ್ಪಡಿಸದೆಯೂ ಅಥವಾ ಕಡಿಮೆ ಉಷ್ಣತೆಯಲ್ಲಿ ಓಜೋ಼ನೀಕರಿಸುವುದರಿಂದಲೂ ದ್ರಾವಣರೂಪದಲ್ಲಿ ವಿಭಜಿಸುವುದರಿಂದಲೂ ಓಜೋ಼ನೈಡುಗಳ ಸ್ಫೋಟನೆಯನ್ನು ನಿವಾರಿಸಬಹುದು. ಉತ್ಪನ್ನ ವಸ್ತುಗಳು ಉತ್ಕರ್ಷಣೆಗೆ ಒಳಗಾಗದಂತೆ ಮತ್ತು ಪಾಲಿಮರುಗಳಾಗದಂತೆ ತಡೆಯಲು ಓಜೋ಼ನೀಕರಣ ಕ್ರಿಯಾವಿನ್ಯಾಸ (ಮೆಕಾನಿಸಂ) ಮತ್ತು ಓಜೋ಼ನೈಡುಗಳ ವಿಭಜನೆಯ ಸಮರ್ಪಕ ತಾಂತ್ರಿಕ ಜ್ಞಾನ ಅತ್ಯವಶ್ಯ.

ಕ್ರಿಯಾವಿನ್ಯಾಸ: ಓಲಿಫಿನ್ನಿನೊಡನೆ ಓಜೋ಼ನಿನ ವರ್ತನೆ ಕೆಳಗೆ ತೋರಿಸಿರುವ ಪ್ರಕಾರದಲ್ಲಿರಬಹುದೆಂದು 1950ರ ವರೆಗೂ ಭಾವಿಸಲಾಗಿತ್ತು.
ಹೀಗೆ ಉತ್ಪತಿಯಾಗುವ ಅಂತ್ಯದ ನೈಜ ಓಜೋ಼ನೈಡು (II) ಅಪಕರ್ಷಣಕಾರಿ ಅಥವಾ ಉತ್ಕರ್ಷಣಕಾರಿಯ ಸಂಪರ್ಕದಲ್ಲಿ ಜಲವಿಶ್ಲೇಷಿಸಿ ಆಲ್ಡಿಹೈಡ್, ಕೀಟೋನ್ ಅಥವಾ ಆಮ್ಲವನ್ನು ಕೊಡುವುದು. ಓಜೋ಼ನು ಎಲಕ್ಟ್ರೋಫಿಲಿಕ್ಕಾರಕವೆಂದೂ ಅದು ಕೆಳಗೆ ತೋರಿಸಿರುವ ರೀತಿಯಲ್ಲಿ ಧ್ರುವೀಕೃತ (ಪೋಲರೈಜ಼ಡ್)  ದ್ವಿಬಂಧನವನ್ನು ಭೇದಿಸುವುದೆಂದೂ 1950 ರಿಂದೀಚೆಗೆ ಊಹಿಸಿದ್ದಾರೆ. 
ರಚನೆ (III) ರಿಂದ ಆಕ್ಸಿಜನ್ ಅಣು ವಿಮೋಚನೆಯಾಗುವುದರಿಂದ ಎಪಾಕ್ಸೈಡುಗಳು ಉತ್ಪತ್ತಿಯಾಗುವುದನ್ನು ಸಮರ್ಥಿಸಬಹುದು. ಅಂದರೆ ಮೊದಲ ಓಜೋ಼ನೈಡು (I) ಹೀಗಿರಬಹುದು. 

ಇದು ಆಲ್ಡಿಹೈಡ್ ಅಥವಾ ಕೀಟೋನ್ ಮತ್ತು ಕೆಳಗೆ ತೋರಿಸಿರುವ ಅನುರಣ (ರೆಸೊóನೆನ್ಸ್‌) ರಚನೆ ಪಡೆದಿರುವ ಜಿû್ವಟ್ಟರೈಯಾನುಗಳಾಗಿ ವಿಭಜಿಸುತ್ತದೆ.
 
ನೀರು ಆಲ್ಕೊಹಾಲ್ ಅಥವಾ ಆಮ್ಲಗಳಂಥ ಅಯಾನುಕಾರಕ ದ್ರಾವಕಗಳೊಡನೆ (ಅಯಾನಿಕ್ ಸಾಲ್ವೆಂಟ್ಸ್‌) ಜಿû್ವಟ್ಟರೈಯಾನು ವರ್ತಿಸಿ ಆಕ್ಸಿಪೆರಾಕ್ಸೈಡ್ (Iಗಿ) ಆಗಬಹುದು. ಇದರಲ್ಲಿ ಖ ಇದೆ; ಅದು ಆಲ್ಕೈಲ್ ಗುಂಪು ಅಥವಾ ಅಸೈಲ್ ಗುಂಪು ಅಥವಾ ಊ ಆಗಿರಬಹುದು. ಅಲ್ಲದೆ ಸ್ವಯಂವರ್ತಿಸಿ ಪೆರಾಕ್ಸೈಡ್ ಡೈಮರ್ (ಗಿ) ಅಥವಾ ಪಾಲಿಮರಿಕ್ ಪೆರಾಕ್ಸೈಡನ್ನು (ಗಿI) ಕೊಡಬಹುದು. ಕಾರ್ಬನ್ ಟೆಟ್ರಕ್ಲೋರೈಡಿನಂಥ ಅಯಾನುಕಾರಕವಲ್ಲದ ದ್ರಾವಕಗಳ ಸಂಪರ್ಕದಲ್ಲಿ  ಜಿû್ವಟ್ಟರೈಯಾನ್ ಆಲ್ಡಿಹೈಡ್ ಅಥವಾ ಕೀಟೋನಿನೊಡನೆ ಪರಿವರ್ತಿಸಿ ಪ್ರಥಮ ವರ್ಗದ ಓಜೋ಼ನೈಡನ್ನು(II) ಅಥವಾ ಪಾಲಿಮರಿಕ್ ಓಜೋ಼ನೈಡನ್ನು(III) ಕೊಡಬಹುದು.
  
ಆರೋಮ್ಯಾಟಿಕ್ ಸಂಯುಕ್ತಗಳಲ್ಲಿರುವ ದ್ವಿಬಂಧಕ್ಕಿಂತ ತೆರೆದ ಶ್ರೇಣಿಗಳ ಎಥಿಲೀನ್ ಬಂಧ ವಸ್ತುಗಳ ಮೇಲೆ ಓಜೋ಼ನೀಕರಣ ಸರಾಗವಾಗಿರುವುದು. ಒಂದು ಯುಗ್ಮಸ್ಥಿತಿಯಲ್ಲಿನ ಮೊದಲ ದ್ವಿಬಂಧದ ಮೇಲೆ ಓಜೋ಼ನ್ ನಿರಾಯಾಸವಾಗಿ ವರ್ತಿಸುವುದು; ಎರಡನೆಯ ದ್ವಿಬಂಧದ ಮೇಲೆ ಇನ್ನೂ ನಿಧಾನವಾಗಿ ವರ್ತಿಸುವುದು. 

ಇಂಗಾಲ-ಇಂಗಾಲ ಪರಮಾಣುಗಳ ಮಧ್ಯದಲ್ಲಿರುವ ದ್ವಿಬಂಧದ ಮೇಲೆ ಇಂಗಾಲ-ಸಾರಜನಕ ದ್ವಿಬಂಧನಕ್ಕಿಂತ ಬೇಗನೆ ಓಜೋ಼ನೀಕರಣವಾಗುವುದು. ಹೆಚ್ಚಾಗಿ ಆದೇಶಿತ ಇಂಗಾಲ ಪರಮಾಣುಗಳಲ್ಲಿ ಅಥವಾ ಸ್ಟೀರಿಕ್ ತೊಡಕು ಇರುವ ಉಂಗುರ ಸಂಯುಕ್ತಗಳಲ್ಲಿ ಓಜೋ಼ನೀಕರಣ ಎಥಿಲೀನ್ ದ್ವಿಬಂಧದ ಮೇಲೆ ಆಗುವಷ್ಟು ಆಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಪಾಲಿಮರ್ ಓಜೋ಼ನೈಡುಗಳಾಗುವುದುಂಟು. ದ್ರಾವಕಗಳ ಪ್ರಭಾವ ಸಾಕಷ್ಟು ಇದೆ. ಉದಾಹರಣೆಗೆ ಅಸಿಟಿಕ್ ಆಮ್ಲ ಒಂದು ಅಯಾನುಕಾರಕ ದ್ರಾವಕ. ಇದರಲ್ಲಿ ಮಾನೋಮರಿಕ್ ಓಜೋ಼ನೈಡುಗಳಾಗುವುವು. ಅಯಾನುಕಾರಕವಲ್ಲದ ದ್ರಾವಕಗಳಾದ ಕಾರ್ಬನ್ ಟೆಟ್ರಕ್ಲೋರೈಡಿನಲ್ಲಿ ಪಾಲಿಮರಿಕ್ ಓಜೋ಼ನೈಡುಗಳಾಗುವುದು ಸಾಮಾನ್ಯ. ಓಜೋ಼ನಿನ ಪ್ರಬಲತೆ ಅತಿ ಹೆಚ್ಚಾಗಿದ್ದರೆ ಅಥವಾ ಓಜೋ಼ನೀಕರಣವನ್ನು ಹೆಚ್ಚು ಕಾಲ ಮುಂದುವರಿಸಿದರೆ ಓಜೋ಼ನೈಡುಗಳು ವಿಭಜಿಸುವುವಲ್ಲದೆ ಉತ್ಪನ್ನ ವಸ್ತುಗಳ ಉತ್ಕರ್ಷಣೆ ಸುಲಭವಾಗಿ ನಡೆದಿರುತ್ತದೆ. ಓಜೋ಼ನೀಕರಣದಿಂದ ಓಜೋ಼ನೈಡನ್ನು ಪಡೆಯುವುದಕ್ಕಿಂತಲೂ ಅವುಗಳ ವಿಭಜನೆಯಿಂದ ಬೇಕಾದ ಅಂತ್ಯ ಪದಾರ್ಥ ಪಡೆಯುವುದು ಕಷ್ಟಸಾಧ್ಯವಾದುದು. ನೀರು ಅಥವಾ ಉತ್ಕರ್ಷಣಕಾರಿಗಳ ಸಂಪರ್ಕದಲ್ಲಿ ವಿಭಜಿಸಿದಾಗ ಆಮ್ಲಗಳನ್ನು ಪಡೆಯುವುದು ಸುಲಭ. ಆಲ್ಡಿಹೈಡುಗಳು ಬೇಕಾದರೆ ಅಪಕರ್ಷಣಕಾರಿಯನ್ನು ಉಪಯೋಗಿಸಲೇಬೇಕಾಗುವುದು.

 ಕೈಗಾರಿಕಾ ಬಳಕೆ 
 ಈ ಶತಮಾನದ ಮೊದಲಿನಿಂದಲೂ ಓಜೋ಼ನೀಕರಣ ಉಪಯುಕ್ತ ವಿಶ್ಲೇಷಣ ಉಪಕರಣವಾಗಿ (ಅನಲಿಟಿಕಲ್ ಟೂಲ್) ಪ್ರಯೋಗಾಲಯಗಳಲ್ಲಿ ಬಳಕೆಯಲ್ಲಿದ್ದರೂ ಇತ್ತೀಚಿನವರೆಗೂ ಈ ಕ್ರಿಯೆ ಕೈಗಾರಿಕಾ ಕ್ಷೇತ್ರದಲ್ಲಿ ಅಷ್ಟಾಗಿ ಉಪಯೋಗವಾಗದಿರಲು ಕೆಲವು ಕಾರಣಗಳುಂಟು. ಓಜೋ಼ನನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸುವ ಸಮರ್ಥ ಸಲಕರಣೆಗಳ ಅಭಾವ ಒಂದು ಕಾರಣ. ಈಚಿನ ವರ್ಷಗಳಲ್ಲಿ ಇಂಥ ದಕ್ಷ ಉಪಕರಣವನ್ನು ನಿರ್ಮಿಸಿದ್ದಾರೆ ಮತ್ತು ಇಂದು ಓಜೋ಼ನನ್ನು ಎಷ್ಟು ಬೇಕಾದರೂ ಕಡಿಮೆ ಖರ್ಚಿನಲ್ಲಿ ಉತ್ಪಾದಿಸಲು ಸಾಧ್ಯವಿದೆ.
ವ್ಯಾನಿಲಿನನ್ನು ಐಸೋಯುಜಿನಾಲಿನಿಂದ ತಯಾರಿಸಿದ್ದೇ ಬಹುಶಃ ಓಜೋ಼ನೀಕರಣದ ಕೈಗಾರಿಕಾ ರಂಗದ ಪ್ರವೇಶವೆನ್ನಬಹುದು. ಒಂದನೆಯ ಮಹಾಯುದ್ಧಕ್ಕಿಂತ ಮೊದಲು ಈ ವಿಧಾನವನ್ನು ಯೂರೋಪ್ ಮತು ಸಂಯುಕ್ತಸಂಸ್ಥಾನಗಳಲ್ಲಿ ಅಲ್ಪಸ್ವಲ್ಪ ಯಶಸ್ಸಿನಿಂದ ನಡೆಸಿಕೊಂಡು ಬರಲಾಯಿತು. ಓಲಿಕ್ ಆಮ್ಲದ ಓಜೋ಼ನೀಕರಣದಿಂದ ಅಜಿ಼ಲೈಕ್ ಮತ್ತು ಪೆಲಾರ್ಗೋನಿಕ್ ಆಮ್ಲಗಳನ್ನು ವಾಣಿಜ್ಯ ಮಟ್ಟದಲ್ಲಿ ಉತ್ಪಾದಿಸುತ್ತಾರೆ. ಓಲಿಕ್ ಆಮ್ಲವನ್ನು ಅದರ ಅರ್ಧದಷ್ಟು ತೂಕ ಪೆಲಾರ್ಗೋನಿಕ್ ಆಮ್ಲದಲ್ಲಿ ಕರಗಿಸಿ 2% ರಷ್ಟು ಓಜೋ಼ನ್ ಇರುವ ಆಕ್ಸಿಜನ್ನಿನಿಂದ ಪ್ರತಿಪ್ರವಾಹವರ್ತಕ ಕೋಶದಲ್ಲಿ ಓಜೋ಼ನೀಕರಿಸುವುದು; ಹೀಗೆ ಓಜೋ಼ನೀಕರಿಸಿದ ಮಿಶ್ರಣವನ್ನು ಆಕ್ಸಿಜನ್ ಪ್ರವಾಹದಲ್ಲಿ ಸತತವಾಗಿ ಕೆಲವು ಗಂಟೆಗಳ ಅವಧಿಯಲ್ಲಿ ಪಟು ಆಕ್ಸಿಜನ್ ಬಲು ಕಡಿಮೆಯಾಗುವವರೆಗೂ ಉತ್ಕರ್ಷಿಸುವುದು; ಮತ್ತೆ ನಿರ್ವಾತದಲ್ಲಿ ಬಟ್ಟಿ ಇಳಿಸುವುದರಿಂದ ಪೆಲಾರ್ಗೋನಿಕ್ ಮತ್ತು ಅಜಿ಼ಲೈಕ್ ಆಮ್ಲಗಳನ್ನು ಉತ್ಪಾದಿಸಬಹುದು.
ಇಂಗ್ಲೆಂಡ್ ಮತ್ತು ಜಪಾನಿನಲ್ಲಿ ಓಲಾಯಿಲ್ ನೈಟ್ರೈಲ್ ಮತ್ತು ಓಲಾಯಿಲುಗಳ ಓಜೋ಼ನೀಕರಣದಿಂದ ವಿ-ಆಮೈನೋಪೆಲಾರ್ಗೋನಿಕ್ ಆಮ್ಲ ಸಂಶ್ಲೇಷಿಸುವುದನ್ನು ವಿಶೇಷವಾಗಿ ಸಂಶೋಧಿಸುತ್ತಿದ್ದಾರೆ. ನೈಲಾನ್-9 ನೂಲನ್ನು ಲ್ಯಾಕ್ಟಮಿನಿಂದ ಉತ್ಪಾದಿಸುವುದನ್ನು ಜಪಾನೀಯರು ಕಂಡುಹಿಡಿದಿರುವುದಾಗಿ ತಿಳಿದುಬಂದಿದೆ. ಕಾರ್ಟಿಸೋನು ಮತ್ತು ಹಾರ್ಮೋನುಗಳ ಸಂಶ್ಲೇಷಣೆಯಲ್ಲಿ ಓಜೋ಼ನೀಕರಣವನ್ನು ವಾಣಿಜ್ಯಮಟ್ಟದಲ್ಲಿ ಈಚೆಗೆ ಅಳವಡಿಸಿದ್ದಾರೆ.	(ಪಿ.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ